kalimah.top
a b c d e f g h i j k l m n o p q r s t u v w x y z 0 1 2 3 4 5 6 7 8 9 #

santosh venky & supriya lohith - parichayisu كلمات أغنية

Loading...

ಪರಿಚಯಿಸು ನನಗೆ ನೀನೇ
ಅಪರಿಚಿತ ಭಾವನೆ
ಗುಣಪಡಿಸು ಮನದ ಬೇನೆ

ಅಪರಿಮಿತ ಯಾತನೆ
ಕಳಿಸಿ ಕನಸನೆ
ಉಳಿಸಿ ನೆನಪನೆ
ಈ ಪ್ರೀತೀನೆ ನನಗೀಗ ಸಂಪಾದನೆ
ಪರಿಚಯಿಸು ನನಗೆ ನೀನೇ
ಅಪರಿಚಿತ ಭಾವನೆ
ಗುಣಪಡಿಸು ಮನದ ಬೇನೆ
ಅಪರಿಮಿತ ಯಾತನೆ

ಕಾಡುವ ವಿಷಯ
ಗೀಚಿದೆ ಹಗೆಯ
ನಲುಮೆ ಹೆಸರಲ್ಲಿ ಹೊಸ ಕಥೆಯ
ಸಾಗುವ ದಾರಿಯ
ನಡುವೆ ನಿನ್ನಯ
ಹೆಜ್ಜೆಯ ಜೊತೆಯಲಿ ಇದೆ ಹೃದಯ
ಅಗೆಸಿ ಮನವ ನೀ
ಅರಸಿ ಅವಳನೇ
ಈ ಪ್ರೀತೀನೆ ನನಗೀಗ ಸಂಶೋಧನೆ
ಪರಿಚಯಿಸು ನನಗೆ ನೀನೇ
ಅಪರಿಚಿತ ಭಾವನೆ
ಗುಣಪಡಿಸು ಮನದ ಬೇನೆ
ಅಪರಿಮಿತ ಯಾತನೆ

ನೀನೀಗ ಮೋಡದಂತೆ
ನಾನೀಗ ಭೂಮಿಯಂತೆ
ಕಾಯುತ್ತ ಕೂತಿರುವೆ ಮಳೆಗಾಗಿ
ನೀನೀಗ ತೋಟದಂತೆ
ನಾನೀಗ ಬೇಲಿಯಂತೆ
ಕಾಯುತ್ತ ನಿಂತಿರುವೆ ಬಲವಾಗಿ
ಒಲವ ಮೇವನೆ
ಹಾಕಿ ಮೆಲಕನೆ
ಈ ಪ್ರೀತೀನೆ ನನಗೀಗ ಸಂಗೋಪನೆ
ಪರಿಚಿಯಸು ನನಗೆ ನೀನೇ
ಅಪರಿಚಿತ ಭಾವನೆ
ಗುಣಪಡಿಸು ಮನದ ಬೇನೆ
ಅಪರಿಮಿತ ಯಾತನೆ

كلمات أغنية عشوائية

كلمات الأغنية الشائعة حالياً

Loading...