kalimah.top
a b c d e f g h i j k l m n o p q r s t u v w x y z 0 1 2 3 4 5 6 7 8 9 #

s.p. balasubrahmanyam & chitra - o meghave meghave كلمات الأغنية

Loading...

ಓ ಹೋ ಹೋ …
ಆ ಹಾ ಹಾ …

ಓ ಮೇಘವೇ ಮೇಘವೇ ಹೋಗಿಬ
ಈ ಓಲೆಯ ಅವಳಿಗೆ ನೀಡಿಬಾ
ನಾ ಹೋಗಲು ಮಾತಾಡಲು
ಈ ನಾಚಿಕೆ ಅಂಜಿಕೆ ಮುಂದಿದೆ

ಓ ಮೇಘವೇ ಮೇಘವೇ ಹೋಗಿಬ
ಈ ಓಲೆಯ ಅವನಿಗೆ ನೀಡಿಬಾ
ನಾ ಹೋಗಲು ಮಾತಾಡಲು
ಈ ನಾಚಿಕೆ ಅಂಜಿಕೆ ಮುಂದಿದೆ

ಓ ಮೇಘವೇ ಮೇಘವೇ ಹೋಗಿಬ
ಈ ಓಲೆಯ ಅವಳಿಗೆ ನೀಡಿಬಾ

ಮುಗಿಲ ಬಾನಗಲ ಓಲೆಯಲಿ ಹೃದಯ
ಇಡುವೆ ನೀಡಿರುವೆ ಓ ಗೆಳತಿ ಓದುವೆಯ?
ಮುಗಿಲ ಬಾನಗಲ ಓಲೆಯಲಿ ಹೃದಯ
ಇಡುವೆ ನೀಡಿರುವೆ ಓ ಗೆಳೆಯ ಓದುವೆಯ?
ಈ ಬೆಳ್ಳನೆ ಓಲೆಯ ಹೇಗೆ ನಾ ಓದಲಿ?
ಇದು ಓದೋ ಓಲೆಯಲ್ಲ ಬರೆದುಕೋ
ನನ್ನ ಜೀವ ನಿನಗೆ ಎಂದುಕೋ…
ನಿನ್ನ ಮನದ ಮನೆಗೆ ತಂದುಕೋ
ಈ ಕಂಗಳ ಮುಂಬಾಗಿಲ
ಬಾ ತೆರೆಯುವೆ ಬಂದು ನೀ ಸೇರಿಕೊ

ಓ ಮೇಘವೇ ಮೇಘವೇ ವಂದನೆ
ಸಂಧಾನದ ಪಾತ್ರಕೆ ವಂದನೆ

ಮುಗಿಲೇ ಬೆಳ್ಳ್ಮುಗಿಲೆ ತಂಪೆಲರೆ ತಳಿರೆ
ಹಗಲೆ ಹಗಲಿರುಳೆ ನಿನ್ನೆದುರು ನಾವೊಬ್ಬರೆ
ವನವೆ ಕಾನನವೆ ಹೂ ಬನವೆ ಹಸಿರೇ
ಗಿರಿಯೇ ನೀರ್ಝರಿಯೆ ನಮ್ಮೊಳಗೆ ನಿಮ್ಮುಸಿರೆ
ಈ ಒಲವಿನ ಕಣ್ಣಲಿ ಸರ್ವವೂ ಸುಂದರ
ಇಲ್ಲಿ ಬಾನು ಭೂಮಿಗಿಲ್ಲ ಅಂತರ
ನಾನು ನೀನು ಇಲ್ಲ ನಮ್ಮಲಿ
ಒಂದೇ ಜೀವ ಜೋಡಿ ಒಡಲಲಿ
ಈ ಕಂಗಳ ಮುಂಬಾಗಿಲ
ನಾ ತೆರೆಯುವೆ ಬಂದು ನೀ ಸೇರಿಕೊ

ಓ ಮೇಘವೇ ಮೇಘವೇ ವಂದನೆ
ಸಂಧಾನದ ಪಾತ್ರಕೆ ವಂದನೆ
ಈ ಕಂಗಳ ಮುಂಬಾಗಿಲ
ನಾ ತೆರೆಯುವೆ ಬಂದು ನೀ ಸೇರಿಕೊ
ಓ ಮೇಘವೇ ಮೇಘವೇ ವಂದನೆ
ಸಂಧಾನದ ಪತ್ರಕೆ ವಂದನೆ

كلمات أغنية عشوائية

كلمات الأغاني الشهيرة

Loading...