kalimah.top
a b c d e f g h i j k l m n o p q r s t u v w x y z 0 1 2 3 4 5 6 7 8 9 #

s. janaki - onde ondu كلمات الأغنية

Loading...

ಒಂದೇ ಒಂದು ಕಣ್ಣ ಬಿಂದು
ಜಾರಿದರೆ ನನ್ನಾಣೆ.
ನಿನ್ನ ನೋವ ಜೊತೆಯೆಂದು

ನಾನಿರುವೆ ನಿನ್ನಾಣೆ.
ರಾತ್ರಿಯ ಬೆನ್ನಿಗೆ
ಬೆಳ್ಳನೆ ಹಗಲು
ಚಿಂತೆಯ ಹಿಂದೆಯೇ
ಸಂತಸ ಇರಲೂ
ಒಂದೇ ಒಂದು ಕಣ್ಣ ಬಿಂದು
ಜಾರಿದರೆ ನನ್ನಾಣೆ.
ಚಿಂತೆಯಲಿ ನಿನ್ನ ಮನ
ದೂಡಿದರೆ ನನ್ನಾಣೆ.
ನೋವಿನ ಬಾಳಿಗೆ
ಧೈರ್ಯವೆ ಗೆಳೆಯ
ಪ್ರೇಮದ ಜೋಡಿಗೆ
ತಾಕದು ಪ್ರಳಯ
ಒಂದೇ ಒಂದು ಕಣ್ಣ ಬಿಂದು
ಜಾರಿದರೆ ನನ್ನಾಣೆ.
ನಿನ್ನ ನೋವ ಜೊತೆಯೆಂದು
ನಾನಿರುವೆ ನಿನ್ನಾಣೆ.
ದಾಹ ನೀಗೋ ಗಂಗೆಯೇ
ದಾಹ ಎಂದು ಕುಂತರೆ.
ಸುಟ್ಟು ಹಾಕುವ ಬೆಂಕಿಯೇ
ತನ್ನ ತಾನೇ ಸುಟ್ಟರೇ.
ದಾರಿ ತೋರುವ ನಾಯಕ
ಒಂಟಿ ಎಂದು ಬಂದರೆ
ಧೈರ್ಯ ಹೇಳುವ ಗುಂಡಿಗೆ
ಮೂಖವಾಗಿ ಹೋದರೆ
ಸೂರ್ಯನಿಲ್ಲ ಪೂರ್ವದಲ್ಲಿ
ಚಂದ್ರನಿಲ್ಲ ರಾತ್ರಿಯಲಿ.
ದಾರಿಯಿಲ್ಲ ಕಾಡಿನಲ್ಲಿ
ಆಸೆಯಿಲ್ಲ ಬಾಳಿನಲಿ.
ನಂಬಿಕೆ ತಾಳುವ
ಅಂಜಿಕೆ ನೀಗುವ
ಶೋಧನೆ ಸಮಯ
ಚಿಂತಿಸಿ ಗೆಲ್ಲುವ
ಒಂದೇ ಒಂದು ಕಣ್ಣ ಬಿಂದು
ಜಾರಿದರೆ ನನ್ನಾಣೆ.
ನಿನ್ನ ನೋವ ಜೊತೆಯೆಂದು
ನಾನಿರುವೆ ನಿನ್ನಾಣೆ.
ಮೂಢಣದಿ ಮೂಢಿ ಬಾ
ಸಿಂಧೂರವೇ ಆಗಿ ಬಾ.
ಜೀವಧಾರೆ ಆಗಿ ಬಾ
ಪ್ರೇಮ ಪುಷ್ಪ ಸೇರು ಬಾ.
ಬಾನಗಲ ತುಂಬಿ ಬಾ.
ಆಸೆಗಳ ತುಂಬು ಬಾ
ಸಿಂಗಾರವೇ ತೇಲಿ ಬಾ
ಸಂತೋಷವ ನೀಡು ಬಾ.
ಪ್ರೇಮದಾಸೆ ನನ್ನ ನಿನ್ನ
ಬಂಧಿಸಿದೆ ನನ್ನಾಣೆ.
ಸಂತಸದ ಕಣ್ಣ ರೆಪ್ಪೆ
ಸಂಧಿಸಿದೆ ನನ್ನಾಣೆ.
ದೇವರ ಗುಡಿಗು ಬಿನ್ನಗಳಿರಲು
ಬಾಳಿನ ನಡೆಗು ಅಡ್ಡಿಗಳಿರಲು
ಭೂಮಿಯಾಗಿ ನಾನಿರುವೆ
ಚಿಂತೆ ಬೇಡ ನನ್ನಾಣೆ.
ನಿನ್ನ ನೋವ ಮೇರು ಗಿರಿಯ ನಾ
ಹೊರುವೆ ನಿನ್ನಾಣೆ.

كلمات أغنية عشوائية

كلمات الأغاني الشهيرة

Loading...