kalimah.top
a b c d e f g h i j k l m n o p q r s t u v w x y z 0 1 2 3 4 5 6 7 8 9 #

kailash kher - bitbide bitbide كلمات الأغنية

Loading...

ಸಂಗೀತ: ಗುರುಕಿರಣ್
ಗಾಯನ: ಕೈಲಾಶ್ ಖೇರ್
ಸಾಹಿತ್ಯ: ಮಂಜುನಾಥ್ ಸಂಜೀವ್
ಜೀವ ಹೋದ ಬಳ್ಳಿಗೆ ನೀರೇಕೆ?
ಲೂಟಿಯಾದ ಕೋಟೆಗೆ ಕಾವಲೇಕೆ?
ನಾನೇ ಇರದಾ ನನ್ನಲಿ ನೀನೇಕೆ??
ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .
ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .
ಕನಸನು ಕೊಂದಾಯಿತು
ಮಸಣಕೆ ತಂದಾಯಿತು
ಹೂಳುವಾ ವೇಳೆ ಅಳು ಯಾಕಿನ್ನು?
ಹಕ್ಕಿಯು ಹಾರೋಯಿತು
ಗೂಡಿದು ಹಾಳಾಯಿತು.
ಯಾರದೋ ಕಣ್ಣಾ ಬಲಿ ನಾವೇನು. …
ಸಾವಿರ ಶೂಲಾ ಚುಚ್ಚೋ
ಗಾಯಕೂ ತುಂಬಾ ಹೆಚ್ಚು
ಪ್ರೀತಿಯಿಂದಾನೇ ಆಗೋ ಈ ನೋವು .
ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .
ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .
ಜೀವ ಹೋದ ಬಳ್ಳಿಗೆ ನೀರೇಕೆ?
ಲೂಟಿಯಾದ ಕೋಟೆಗೆ ಕಾವಲೇಕೆ?
ನಾನೇ ಇರದ ನನ್ನಲಿ ನೀನೇಕೆ??
ಅರಳಿದಾ ಕೆಂದಾವರೆ .
ದೇವರಿಗೆ ಎಂದಾದರೆ .
ಬಾಡಿ ಹೋಯ್ತಲ್ಲ ಪೂಜೆಗೆ ಮುನ್ನ …
ಭೂಮಿಯೇ ಹೋಳಾದರೆ
ಬಾನದು ಚೂರಾದರೆ
ಬಾಳುವಾ ಮಾತು ಅದು ಸಾಧ್ಯಾನಾ.
ಪ್ರೀತಿಗೆ ಸೋಲೇ ಇಲ್ಲ .
ಎನ್ನುವ ದೊಡ್ಡಾ ಸುಳ್ಳ .
ನಂಬಲೇ ಬೇಡ ಇನ್ನು ನೀನೆಂದು …
ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .
ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .
ಜೀವ ಹೋದ ಬಳ್ಳಿಗೆ ನೀರೇಕೆ?
ಲೂಟಿಯಾದ ಕೋಟೆಗೆ ಕಾವಲೇಕೆ?
ನಾನೇ ಇರದ ನನ್ನಲಿ ನೀನೇಕೆ??
ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .
ಬುಟ್ ಬುಡೆ, ಬುಟ್ ಬುಡೆ, ನನ್ನಷ್ಟಕ್ ನನ್ ಬುಟ್ ಬುಡೆ . ಕೇಳೆ .

كلمات أغنية عشوائية

كلمات الأغاني الشهيرة

Loading...